Author: admin

ಅಕೌಂಟಲ್ಲಿ ಕಾಸಿದ್ರೂ ಕೈಗೆ ಸಿಗ್ತಿಲ್ಲ, ಅಕ್ಷಯ ತೃತೀಯಗೆ cashcrunch, ಮೋದಿ ಸರ್ಕಾರಕ್ಕೆ ಜನರ ಹಿಡಿ ಶಾಪ

ಇಂದು ಅಕ್ಷಯ ತೃತೀಯ. ಒಡವೆ ಕೊಂಡರೆ ಒಳಿತಾಗುತ್ತದೆ ಎಂದೇ ಹೇಳಲಾಗುತ್ತಿದೆ. ಆದರೆ ಎಟಿಎಂಗಳಲ್ಲಿ ನೋ ಕ್ಯಾಶ್ ಎಂಬ ಬೋರ್ಡ್ ನೇತಾಡುತ್ತಿರುವುದು ಕಾಣುತ್ತದೆ. ಹೌದು ಇತ್ತೀಚಿನ ದಿನಗಳಲ್ಲಿ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ಅಲ್ಲೋ ಇಲ್ಲೋ ಒಂದಷ್ಟು ಕಡೆಗಳಲ್ಲಿ ದುಡ್ಡು ಸಿಗೋದು ಬಿಟ್ಟರೆ ಎಲ್ಲಾ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ಇಂದು...

ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ, ಆದರೂ ವಿದೇಶ ಸುತ್ತುವುದರಲ್ಲಿ ಮೋದಿ ಬ್ಯುಸಿ: ಪ್ರವೀಣ್ ತೊಗಾಡಿಯಾ

ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ, ಆದರೂ ಪ್ರಧಾನಿ ವಿದೇಶ ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಮಾಜಿ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಮಂಗಳವಾರದಿಂದ ಅನಿರ್ಧಿಷ್ಟಾವದಿ ಉಪವಾಸ ಕುಳಿತಿರುವ ಪ್ರವೀಣ್ ತೊಗಾಡಿಯಾ, ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳ ಮೇಲೆ...

ಬಸವಕಲ್ಯಾಣದಿಂದ ಸಿಂಧ್ಯ ಕಣಕ್ಕೆ

ಮರಾಠ ಮತದಾರರು ಹೆಚ್ಚಾಗಿರುವ ಬಸವಕಲ್ಯಾಣದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಕಣಕ್ಕಿಳಿಯಲಿದ್ದಾರೆ. ಹಾಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಸೇರಿ ಕಮಲ ಚಿಹ್ನೆಯಡಿ ಸ್ಪರ್ಧಿಸಲು ಅಣಿಯಾದ ಕಾರಣಕ್ಕೆ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಳ್ಳಲು ಸಿಂಧ್ಯ ಅವರನ್ನು ಕಣಕ್ಕಿಳಿಸಲು ದೇವೇಗೌಡ ನಿರ್ಧರಿಸಿದ್ದಾರೆ. ಕ್ಷೇತ್ರದಲ್ಲಿ ಸುಮಾರು 45-50 ಸಾವಿರ...

ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನಿಸಿದರೆ?

ವಿವಾದಿತ ಹೇಳಿಕೆ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹತ್ಯೆಗೆ ಯತ್ನ ನಡೆದಿತ್ತೇ? ಇಂಥದೊಂದು ಪ್ರಶ್ನೆ ಇದೀಗ ಕಾಡುತ್ತಿದೆ. ಅನಂತ್ ಕುಮಾರ್ ಹೆಗಡೆ ಮಾಡಿದ ಟ್ವೀಟ್ ವೊಂದು ಈ ರೀತಿ ಪ್ರಶ್ನೆ ಮೂಡಲು ಕಾರಣವಾಗಿದೆ. ನಿನ್ನೆ ರಾತ್ರಿ ರಾಣಿ ಬೆನ್ನೂರು ತಾಲೂಕಿನ...

ಕನ್ನಡಿಗರಿಗೆ ಬಗ್ಗಿದ KFC

ಕೆಎಫ್ ಸಿ ಸೇರಿದಂತೆ ಕೆಲವು ಬಹುರಾಷ್ಟ್ರೀಯ ಕಂಪನಿಗಳ ಸ್ಟೋರ್ ಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಅಪವಾದದ ನಡುವೆ ಖುಷಿ ವಿಚಾರವೊಂದು ಹೊರಬಿದ್ದಿದೆ. ಕೆಎಫ್ ಸಿನವರು ಈಗ ಕನ್ನಡದಲ್ಲಿ ಮೆನು ಕಾರ್ಡ್ ಪ್ರಿಂಟ್ ಮಾಡಿ ಸರ್ವಿಸ್ ಮಾಡುವ ಮೂಲಕ ಕನ್ನಡ ಗ್ರಾಹಕರನ್ನು ಸೆಳೆಯುವುದರ ಜತೆಗೆ ಕನ್ನಡಕ್ಕೂ ಮನ್ನಣೆ ನೀಡಲು...

ಟಿವಿ ಸೆಟ್ ಟಾಪ್ ಬಾಕ್ಸ್ ಗಳಿಗೆ ಚಿಪ್ ಅಳವಡಿಕೆ

ಟಿಆರ್ ಪಿ ಅಕ್ರಮ ತಡೆಗಟ್ಟಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೊಸ ಐಡಿಯಾ ಮಾಡಿದೆ. ಟಿವಿ ವೀಕ್ಷಕರ ಸಂಖ್ಯೆ ಅಳೆಯುವ ನಿಟ್ಟಿನಲ್ಲಿ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸಲು ಯೋಜನೆ ರೂಪಿಸಿದೆ. ಇತ್ತೀಚಿನ ದಿನಗಳಲ್ಲಿ ಟಿಆರ್ ಪಿ ಮಾನದಂಡವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಯಾವ ಚಾನಲ್...

ಪ್ರೀಮಿಯರ್ ಏರಿದ ಜಗ್ಗೇಶ್

ನವರಸನಾಯಕ ಜಗ್ಗೇಶ್ ಇದೀಗ ಪ್ರೀಮಿಯರ್ ಪದ್ಮಿಣಿ ಏರಿದ್ದಾರೆ. ಅರೆ ಇದೇನಪ್ಪಾ ಎಲ್ಲರೂ ಐಷಾರಾಮಿ ಕಾರು ಕೊಂಡರೆ ಇವರೇಕೆ ಪ್ರೀಮಿಯರ್ ಪದ್ಮಿಣಿ ಕೊಂಡಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಜಗ್ಗೇಶ್ ಇದೀಗ ಹೊಸ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೀಮಿಯರ್ ಪದ್ಮಿಣಿ ಎಂಬ ಹೊಸ ಚಿತ್ರದಲ್ಲಿ ಹೊಸ ಗೆಟಪ್ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ವಿಚ್ಚೇದನ...

ಮೊಳಕಾಲ್ಮೂರಲ್ಲಿ ಕಮಲ ಮುಳುಗಿಸಲು ಕಾಂಗ್ರೆಸ್ ಸಜ್ಜು

ಶ್ರೀರಾಮುಲು ದಿಢೀರ್ ಎಂಟ್ರಿಯಿಂದ ಭಿನ್ನಮತ ಸೃಷ್ಟಿಯಾಗಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಮಲ ಮುಳುಗಿಸಲು ಕಾಂಗ್ರೆಸ್ ಸಜ್ಜಾಗಿದೆ. ಹಾಲಿ ಶಾಸಕರಾಗಿರುವ ತಿಪ್ಪೇಸ್ವಾಮಿ ಇದೀಗ ಬಿಜೆಪಿಗೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಹಿಂದೆ ಅಣ್ಣತಮ್ಮಂದಿರಂತಿದ್ದ, ಶ್ರೀರಾಮುಲು ಪಕ್ಷದ ಚಿಹ್ನೆಯಡಿ ಗೆದ್ದಿದ್ದ ತಿಪ್ಪೇಸ್ವಾಮಿ ಇದೀಗ ವಿಚಲಿತರಾಗಿದ್ದಾರೆ. ಪರಸ್ಥಳದಿಂದ ಬಂದು ಮೊಳಕಾಲ್ಮೂರಿನಲ್ಲಿ...

ಬರ್ತ್ ಡೇ ದಿನಾಂಕ, 123, ಎಬಿಸಿಡಿಯಂತ ಪಾಸ್ ವರ್ಡ್ ನೀಡಿದ್ದರೆ ತಕ್ಷಣ ಬದಲಿಸಿ!

ಈಗ ಏನಿದರೂ ಗ್ಯಾಜೆಟ್ ಜಮಾನ. ಸ್ಮಾರ್ಟ್ ಪೋನ್, ಕಂಪ್ಯೂಟರ್ ಇಲ್ಲದೆ ಕಾಲವೇ ಮುಂದಕ್ಕೆ ಹೋಗಲ್ಲ. ಆ ಮಟ್ಟಿಗೆ ಅವಲಂಬಿತವಾಗಿಬಿಟ್ಟಿದ್ದೇವೆ. ಪ್ರತಿಯೊಂದನ್ನು ಇಮೇಲ್, ವಾಟ್ಸಾಪ್, ಪೇಸ್ ಬುಕ್, ಯೂಟೂಬ್ ನಲ್ಲೇ ತಿಳಿದುಕೊಳ್ಳುವ ಕುತೂಹಲ. ಅಂಗೈಯಲ್ಲೇ ವಿಶ್ವದ ವಿದ್ಯಾಮಾನ ತಿಳಿದುಕೊಳ್ಳುವ ಮುನ್ನ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಉತ್ತಮ. ಈಗಂತೂ ಬಹುತೇಕ...

ಸಿದ್ದರಾಮಯ್ಯಗೆ ಈಗ ಸ್ತ್ರೀ ಕಂಟಕ!

ಚುನಾವಣೆ ಸನಿಹವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಗೆ ಒಂದಿಲ್ಲೊಂದು ಅಡೆತಡೆಗಳು ಎದುರಾಗುತ್ತಲೇ ಇವೆ. ವಿರೋಧಿಗಳ ರಣತಂತ್ರಕ್ಕೆ ಸೆಡ್ಡು ಹೊಡೆದಿರುವ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಚಾಮುಂಡೇಶ್ವರಿ ಅಲ್ಲದಿದ್ದರೂ ಬಾದಾಮಿಯಲ್ಲಾದರೂ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದ ಸಿದ್ದರಾಮಯ್ಯಗೆ ಈಗ ಸ್ತ್ರೀ ಕಂಟಕ ಶುರುವಾಗಿದೆ. ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ...