Category: ಮೇನ್ ನ್ಯೂಸ್

ಎಚ್ ಡಿಕೆ ಪ್ರಮಾಣವಚನ ಮುಂದೂಡಿಕೆ ಹಿಂದಿರುವ ಅಸಲಿ ಕಾರಣ ಇಲ್ಲಿದೆ

ಬಹುಮತ ಸಾಬೀತುಪಡಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಗೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯಪಾಲರು ಆಹ್ವಾನಿಸಿದ್ದಾರೆ. ಬಹುಮತ ಹೊಂದಿರುವ ಕುಮಾರಸ್ವಾಮಿ ಸೋಮವಾರ ಮುಖ್ಯಮಂತ್ರಿಯಾಗಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ಸ್ವೀಕರಿಸುವುದಾಗಿ ಘೋಷಿಸಿದ್ದರು. ಆದರೆ ನಂತರದಲ್ಲಿ ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಿದರು. ಸೋಮವಾರ ಶುಭದಿನವಾದರೂ ಪ್ರಮಾಣವಚನ ಮುಂದೂಡಿಕೆಯಾಗಿರುವುದರ ಹಿಂದಿರುವ...

ಇಬ್ಬರು ಕಾಂಗ್ರೆಸ್ ಶಾಸಕರು ಚಕ್ಕರ್!

ಯಡಿಯೂರಪ್ಪ ಸರ್ಕಾರ ಬಹುಮತ ಸಾಬೀತು ಪಡಿಸಲು ಬೇಕಾಗಿದ್ದ ಮ್ಯಾಜಿಕ್ ನಂಬರ್ ಈಗ 110ಕ್ಕೆ ಬಂದು ನಿಂತಿದೆ. 11 ಗಂಟೆಗೆ ಸದನ ಆರಂಭವಾದಗ 222 ಶಾಸಕರ ಪೈಕಿ ಪ್ರಮಾಣವಚನ ಪಡೆಯಲು 219 ಮಂದಿ ಮಾತ್ರ ಆಗಮಿಸಿದ್ದಾರೆ. ಹೀಗಾಗಿ ಸದ್ಯದ ಮ್ಯಾಜಿಕ್ ನಂಬರ್ 110 ಆಗಿದೆ. ವಿಜಯನಗರ ಶಾಸಕರ ಆನಂದ್...

ಮೇ 29ಕ್ಕೆ ಮುಂಗಾರು

ಮೇ 29ರಂದು ಕೇರಳದ ಕರಾವಳಿ ತೀರಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮೇ 29ರಿಂದ ಮೂರು ದಿನ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಮುಂಗಾರು ಆಗಮಿಸಲಿದೆ. ಆದರೆ ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ...

ನಾಳೆ ಯಡಿಯೂರಪ್ಪಗೆ ಅಳಿವು ಉಳಿವು

ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ನಾಳೆ ಸಂಜೆ ನಾಲ್ಕು ಗಂಟೆಗೆ ಬಿಜೆಪಿ ಬಹುಮತ ಸಾಬೀತು ಪಡಿಸಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಾಳೆ ಸಂಜೆ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಹೈದರಾಬಾದ್ ಗೆ ತೆರಳಿರುವ ಜೆಡಿಎಸ್, ಬಿಜೆಪಿ ಶಾಸಕರು ಬೆಂಗಳೂರಿಗೆ...

ನಾಳೆ ವಿಶ್ವಾಸ ಮತಯಾಚನೆ?

15 ದಿನದೊಳಗೆ ಬಹುಮತ ಸಾಬೀತು ಪಡಿಸುವಂತೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ನೀಡಿದ್ದ ಗಡುವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿರುವುದಾಗಿ ತಿಳಿದುಬಂದಿದೆ. ಸದ್ಯದ ಬ್ರೇಕಿಂಗ್ ನ್ಯೂಸ್ ಪ್ರಕಾರ ನಾಳೆಯೇ ವಿಶ್ವಾಸ ಮತಯಾಚನೆ ಮಾಡುವಂತೆ ನ್ಯಾಯಮೂರ್ತಿಗಳು ಹೇಳಿದ್ದಾರೆ ಎನ್ನಲಾಗುತ್ತಿದೆ. ನ್ಯಾಯಮೂರ್ತಿಗಳ ಈ ಆದೇಶದ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಸದನದಲ್ಲಿ...

ಮೊದಲು ಕೊಚ್ಚಿ ಆಮೇಲೆ ಪುದುಚೇರಿ ಈಗ ಹೈದರಾಬಾದ್

ರಾಜ್ಯ ರಾಜಕೀಯದ ದೊಂಬರಾಟ ದಿನೇ ದಿನೇ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿಯಿಂದ ಆಪರೇಷನ್ ಕಮಲ ತಡೆಯುವ ನಿಟ್ಟಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡುತ್ತಿದೆ. ಮೊದಲು ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್, ಜೆಡಿಎಸ್ ಶಾಸಕರು ನಂತರ ಕೊಚ್ಚಿಗೆ ಶಿಫ್ಟ್...

ಸಿಎಂ ಆದ ಕೂಡಲೇ ರೈತರ 1 ಲಕ್ಷ ರೂ. ಸಾಲ ಮನ್ನಾ

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿದ್ದ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದುವರೆ ಗಂಟೆಯಲ್ಲೇ ರೈತರ ಸಾಲ ಮನ್ನಾ ಮಾಡಿರುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳಲ್ಲಿದ್ದ 1 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿರುವುದಾಗಿ ಬಿಎಸ್ ವೈ ಹೇಳಿದ್ದಾರೆ....

ಸಿಎಂ ಆದ್ರೂ ಸರ್ಕಾರ ರಚನೆ ಮಾಡೋಂಗಿಲ್ಲ!

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ಸರ್ಕಾರ ನಡೆಸದಂತಾಗಿದೆ. ಹೌದು ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರ ಪರಿಣಾಮ ಬಿಎಸ್ ವೈ ಸರ್ಕಾರ ರಚಿಸಲು ಸುಪ್ರೀಂ ತಡೆ ನೀಡಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಎರಡು ಪಕ್ಷಗಳು ಕೋರ್ಟ್ ಮೆಟ್ಟಿಲೇರಿದ್ದವು. ರಾತ್ರಿ 1.45ಕ್ಕೆ ತುರ್ತು...

3ನೇ ಬಾರಿ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ

ಬಿ.ಎಸ್.ಯಡಿಯೂರಪ್ಪ ಅವರು ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಪ್ರಮಾಣವಚನ ಬೋದಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಆಸ್ಪದ ನೀಡದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾನಾ ಕಸರತ್ತು ಮಾಡಿದ್ದವು. ಈ ಸಂಬಂಧ ಸುಪ್ರೀಂ ಕೋರ್ಟ್...

5 ರಾಜ್ಯಗಳಲ್ಲಿ ಬಹುಮತ ಬಂದ ಪಕ್ಷ ಬಿಟ್ಟು ಇತರೆ ಪಕ್ಷಗಳೊಂದಿಗೆ ಬಿಜೆಪಿ ಸರ್ಕಾರ

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿದೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಮೈತ್ರಿ ರಾಜಕಾರಣಕ್ಕೆ ಕಾಂಗ್ರೆಸ್, ಬಿಜೆಪಿ ಮುಂದಾಗಿದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಸರ್ಕಾರ ರಚನೆ ಮಾಡಲು ಹೊರಟಿರುವುದಕ್ಕೆ ಬಿಜೆಪಿ ಖಂಡನೆ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವ ದಿಕ್ಕರಿಸಿ ಮೈತ್ರಿ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದೆ....