Category: ಮೇನ್ ನ್ಯೂಸ್

ಜೆಡಿಎಸ್ ನ ಇಬ್ಬರು ಶಾಸಕರು ನಾಪತ್ತೆ!

ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಕರೆಯಲಾಗಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಇಬ್ಬರು ಶಾಸಕರು ಮಿಸ್ ಆಗಿದ್ದರು ಎಂಬ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ರಾಜಾ ವೆಂಕಟಪ್ಪ ನಾಯಕ ಮತ್ತು ವೆಂಕಟ ರಾವ್ ನಾಡಗೌಡ ಅವರು ಶಾಸಕಾಂಗ ಸಭೆಗೆ ಹಾಜರಾಗಲಿಲ್ಲ. ಈ ಇಬ್ಬರು ಬಿಜೆಪಿ ಜೊತೆ ಏನಾದರೂ ಸಂಪರ್ಕದಲ್ಲಿದ್ದಾರಾ...

ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಬಿಎಸ್ ವೈ ಸಜ್ಜು

ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರನ್ನು ಕೇಳಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಮ್ಮ ಪಕ್ಷ ಬಹುಮತ ಪಡೆದುಕೊಂಡಿರುವುದರಿಂದ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಬೇಕು ಎಂದು ಕೋರಲಾಗಿದೆ ಎಂದು ಬಿಎಸ್ ವೈ ಹೇಳಿದ್ದಾರೆ. ಸಿಎಂ ಆಗಿ...

ಕಾಂಗ್ರೆಸ್ ನಲ್ಲಿ ನಾಲ್ವರು ಮಿಸ್ಸಿಂಗ್?

ಆಪರೇಷನ್ ಕಮಲ ಭೀತಿಯಲ್ಲಿರುವ ಕಾಂಗ್ರೆಸ್ ಗೆ ನಾಲ್ವರು ಶಾಸಕರು ಕೈ ಕೊಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹಾರಿದ್ದ ಆನಂದ್ ಸಿಂಗ್ ಸೇರಿದಂತೆ ಹೈದರಾಬಾದ್ ಕರ್ನಾಟಕದ ನಾಲ್ವರು ಶಾಸಕರು ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸಂಪರ್ಕಕ್ಕೆ ಸಿಗದ ನಾಲ್ವರು ಶಾಸಕರು...

ಇದೇನಿದು ಎಚ್ ಡಿಕೆ, ಜಾವೇಡ್ಕರ್ ಭೇಟಿ?

ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಜೆಡಿಎಸ್ ಮುಂದಾಗುತ್ತಿದ್ದಂತೆ ಎಚ್ಚೆತ್ತುಗೊಂಡಿರುವ ಬಿಜೆಪಿ ಇದೀಗ ಜೆಡಿಎಸ್ ಜೊತೆ ಮಾತುಕತೆ ನಡೆಸಲು ಮುಂದಾಗಿದೆ. ಎಚ್.ಡಿ.ಕುಮಾರಸ್ವಾಮಿ ತಂಗಿದ್ದ ಹೋಟೆಲ್ ಗೆ ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಕಾಶ್ ಜಾವಡೇಕರ್ ಅವರೇ ಖುದ್ದು ತೆರಳಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿವೆ....

ಬಣ್ಣ ಹಚ್ಚೋರಿಗೆ ಬಟನ್ ಹೊತ್ತದ ಮತದಾರ

ಸಿನಿಮಾ ನಟರು ಬೆಳ್ಳಿ ಪರದೆಗಷ್ಟೇ ಸೀಮಿತ, ರಾಜಕಾರಣಕ್ಕಲ್ಲ ಎಂಬುದನ್ನು ಮತದಾರರ ಈ ಬಾರಿ ಕೂಡ ಸಾಬೀತು ಪಡಿಸಿದ್ದಾನೆ. ಕಳೆದ ಬಾರಿ ಲಕ್ ನಲ್ಲಿ ಗೆಲುವು ಸಾಧಿಸಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ತೆರದಾಳದಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಉಮಾಶ್ರೀ ಸಚಿವೆಯಾಗಿದ್ದಾಗ ಯಾವುದೇ ಕೆಲಸ ಮಾಡದೆ ಕೇವಲ ಮಾತಿನಲ್ಲಿ ಮಣೆ...

ಡಿಕೆಶಿ V/S ಶ್ರೀರಾಮುಲು

ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಸರ್ಕಾರ ರಚನೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಈ ಎರಡು ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಬಹುಮತಕ್ಕೆ ಬೇಕಾದ...

ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಯೋಗಿಶ್ವರ್?

ಚುನಾವಣೆಯಲ್ಲಿ ಹಣದ ಹೊಳೆ ಹರಿದಿದ್ದು ಈ ಬಾರಿ ನಾನು ಗೆಲುವುದು ಕಷ್ಟ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗಿಶ್ವರ್ ಅವರು ಹೇಳಿಕೆ ನೀಡುವ ಮೂಲಕ ಫಲಿತಾಂಶಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ. ಎಲೆಕ್ಷನ್ ನಲ್ಲಿ ಡಿಕೆ ಬ್ರದರ್ಸ್ ಸಾಕಷ್ಟು ಹಣ ಹಂಚಿದ್ದಾರೆ. ಬೇರೆ ಪಕ್ಷದಿಂದ ಕಣಕ್ಕಿಳಿದಿದ್ದರೆ ಗೆಲ್ಲಬಹುದಿತ್ತು. ಆದರೆ ಬಿಜೆಪಿಯಿಂದ ಕಷ್ಟವಾಗಿದೆ...

ತಾರಾ ಹೆಸರು ತೂರಿ ಬಿಟ್ಟಿದ್ದರ ಹಿಂದಿನ ರಹಸ್ಯವೇನು?

ಶಾಸಕ ವಿಜಯ್ ಕುಮಾರ್ ಅವರ ನಿಧನದಿಂದಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ರದ್ದಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೀಗ ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹಗಳು ಶುರುವಾಗಿದೆ. ಒಂದು ಕಡೆ ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅಲಿಯಾಸ್ ತಾರಾ ಅನುರಾಧಾ ಅವರ...

ಎಲೆಕ್ಷನ್ ಮುಗಿಯುತ್ತಿದ್ದಂತೆ ಕರೆಂಟ್ ಶಾಕ್

ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಆಗಿದೆ. ಪ್ರತಿ ಯುನಿಟ್ ಗೆ 82 ಪೈಸೆಯಿಂದ 1 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಬೆಸ್ಕಾಂನಲ್ಲಿ ಪ್ರತಿ ಯುನಿಟ್ ಗೆ 82 ಪೈಸೆ, ಮೆಸ್ಕಾಂ 1.23, ಜೆಸ್ಕಾಂ 1.62 ರೂ.ಗೆ ಏರಿಕೆ ಮಾಡಲಾಗಿದೆ. ಮೆಟ್ರೋಗೆ ವಿದ್ಯುತ್ ದರ ಕಡಿತಗೊಳಿಸಲಾಗಿದೆ. ರೈಲ್ವೆ...

ಶೀಘ್ರದಲ್ಲೇ ಪೆಟ್ರೋಲ್ ಬೆಲೆ 80 ರೂ.ಗೇರಿಕೆ ಸಾಧ್ಯತೆ

ಸದ್ಯ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್ ಹಾಕಲಾಗಿತ್ತು. ಆದರೀಗ ಚುನಾವಣೆ ಮುಗಿದು ಫಲಿತಾಂಶಕ್ಕೆ ಒಂದು ದಿನ ಮಾತ್ರ ಬಾಕಿಯಿದೆ. ರಾಜ್ಯದ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವೇ ತೈಲ ಬೆಲೆಯಲ್ಲಿ ಏರಿಕೆಯಾಗಲಿದೆ. ಅದರಲ್ಲೂ ವಾರಂತ್ಯದ ವೇಳೆಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಎಲ್ಲಾ ಲಕ್ಷಣಗಳಿವೆ ಎಂದು...