Category: ಮೇನ್ ನ್ಯೂಸ್

ಧರೆಗುರುಳಲಿದೆ ಜನತಾ ಬಜಾರ್

ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ತಾಣವಾದ ಕೆಂಪೇಗೌಡ ರಸ್ತೆಯಲ್ಲಿರುವ ಜನತಾ ಬಜಾರ್ ಇನ್ನು ಇತಿಹಾಸ ಪುಟ ಸೇರಲಿದೆ. 50 ವರ್ಷಗಳ ಹಿಂದೆ ತಲೆ ಎತ್ತಿದ್ದ ಜನತಾ ಬಜಾರ್ ಒಂದು ಕಾಲದಲ್ಲಿ ಮದ್ಯಮ ವರ್ಗದವರ ನೆಚ್ಚಿನ ಶಾಪಿಂಗ್ ಸೆಂಟರ್ ಆಗಿತ್ತು. ಇದೀಗ ಈ ಶಾಪಿಂಗ್ ಕಟ್ಟಡವನ್ನು ಕೆಡವಲು ಲೋಕೋಪಯೋಗಿ...

ಭದ್ರತೆ ಕೋರಿ ಬರೆದ 20 ಪತ್ರಗಳಿಗೆ ಸ್ಪಂದಿಸದ ಸರ್ಕಾರ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕಚೇರಿಗೇ ನುಗ್ಗಿ ಚೂರಿ ಇರಿದಿರುವ ಪ್ರಕರಣ ಇದೀಗ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದೆ. ಹೊಟ್ಟೆ, ಎದೆ ಹಾಗೂ ಎಡಗೈಗೆ ಗಾಯವಾಗಿದ್ದು ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಯಮೂರ್ತಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಭದ್ರತೆ ಕುರಿತಂತೆ...

ಮತ್ತೆ ಹೊಸ ಪಕ್ಷ ರಚನೆಯಲ್ಲಿ ಉಪ್ಪಿ

ಪ್ರಜಾಕೀಯ ಮಾಡುವ ಮೂಲಕ ರಾಜಕೀಯ ವ್ಯಾಖ್ಯಾನ ಬದಲಿಸಲು ಹೊರಟ ನಟ ಉಪೇಂದ್ರ ಕೆಪಿಜೆಪಿಗೆ ಗುಡ್ ಬಾಯ್ ಹೇಳಿದ್ದಾರೆ. ಕೆಪಿಜೆಪಿಗೆ ರಾಜೀನಾಮೆ ನೀಡಿದ ಮಾತ್ರಕ್ಕೆ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಆದಷ್ಟು ಬೇಗ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದು ಉಪೇಂದ್ರ ಹೇಳಿದ್ದಾರೆ. ಈಗಿನಿಂದಲೇ ಹೊಸ ಪಕ್ಷ ಸ್ಥಾಪನೆ...

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಫಂಡ್ ಫೀಡ್ ಮಾಡಿದ್ದ ನೀರವ್ ಮೋದಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂ. ವಂಚಿಸಿ ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರು ಬಿಜೆಪಿ ಜೊತೆ ನಿಕಟ ಸಂಬಂಧ ಹೊಂದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೆಲವು ಇಂಗ್ಲಿಷ್ ನ್ಯೂಸ್ ಪೋರ್ಟಲ್ ಗಳು ವರದಿ ಮಾಡಿರುವ ಪ್ರಕಾರ...

ಪಿಎನ್ ಬಿ ಬಳಿಕ 3200 ಕೋಟಿ ರೂ. ಟಿಡಿಎಸ್ ಹಗರಣ

ಸಾವಿರ ಕೋಟಿ ರೂ. ಮುಂಡಾಯಿಸಿದ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ 3200 ಕೋಟಿ ರೂ. ಟಿಡಿಎಸ್ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಉದ್ಯೋಗಿಗಳಿಂದ ಟಿಡಿಎಸ್ ರೂಪದಲ್ಲಿ ಕಡಿತಗೊಳಿಸಿದ್ದ ಹಣವನ್ನು ಕೇಂದ್ರ ಸರ್ಕಾರಕ್ಕೆ ಭರಿಸದ ಕಂಪನಿಗಳು ಸುಮಾರು 3200 ಕೋಟಿ ರೂ. ಹಣವನ್ನು ಸ್ವಹಿತಾಸಕ್ತಿಗೆ...

ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಲೆನಿನ್ ಪ್ರತಿಮೆ ನೆಲಸಮ

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದ 24 ಗಂಟೆಯಲ್ಲೇ ರಷ್ಯಾದ ಸರ್ವಾಧಿಕಾರಿ ಲೆನಿನ್ ಪ್ರತಿಮೆಯನ್ನು ನೆಲಸಮಗೊಳಿಸಲಾಗಿದೆ. ಕಮ್ಯುನಿಸ್ಟರ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ವ್ಲಾದಿಮರ್ ಲೆನಿನ್ ಪ್ರತಿಮೆಯನ್ನು ಬೆಲೋನಿಯಾ ಪಟ್ಟಣದ ಕಾಲೇಜೊಂದರ ಬಳಿ ಐದು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಮೊನ್ನೆ ತ್ರಿಪುರಾ ಚುನಾವಣಾ ಫಲಿತಾಂಶ ಹೊರಬಿದ್ದು ಬಿಜೆಪಿ ಜಯಭೇರಿ...

ತ್ರಿಪುರ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದರು ರಾಜ್ಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತ್ರಿಪುರಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ ರಾಜ್ಯದಲ್ಲಿ ಮೋದಿ ಹವಾ ಏನೂ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಅವರಿಗೆ ಯಡಿಯೂರಪ್ಪ ಅವರದ್ದೇ ದೊಡ್ಡ ಚಿಂತೆಯಾಗಿದೆ. ಅಕ್ರಮ ಗಣಿಗಾರಿಕೆ...

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ

ನೈಸ್ ರಸ್ತೆ ವಿವಾದದಲ್ಲಿ ಸಿಲುಕಿರುವ ಶಾಸಕ ಅಶೋಕ್ ಖೇಣಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷ ಸೇರಿದರು. ಅಶೋಕ್ ಖೇಣಿ ಕಾಂಗ್ರೆಸ್ ಸೇರುತ್ತಿದ್ದಂತೆ ಬಿಜೆಪಿ ಪಕ್ಷದವರು ನೈಸ್ ಹಗರಣದಲ್ಲಿ ಒಳ ಒಪ್ಪಂದವಾಗಿದೆ ಎಂದು ಆರೋಪಿಸುತ್ತಿದ್ದಾರೆ. 20 ಸಾವಿರ...

ಇವಿಎಂ ಮೇಲೆ ಸಿಎಂಗೆ ಮತ್ತೆ ಶಂಕೆ

ಇವಿಎಂ ಮೇಲೆ ಸಿಎಂಗೆ ಮತ್ತೆ ಶಂಕೆ

ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೇ ಬ್ಯಾಲೆಟ್ ಪೇಪರ್ ಕಡೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದ ಇವಿಎಂ ಯಂತ್ರಗಳು ರಾಜ್ಯಕ್ಕೆ ಕಾಲಿಡುತ್ತಿವೆ. ಇಂತಹ ಹೊತ್ತಿನಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಚುನಾವಣೆ ನಡೆದರೆ ಉತ್ತಮ...

ಪ್ರಜ್ವಲ್ ರೇವಣ್ಣಗೆ ಟಿಕೆಟ್ ಡೌಟ್

ದೇವೇಗೌಡ ಕುಟುಂಬದಿಂದ ಇಬ್ಬರು ಮಾತ್ರ ಚುನಾವಣೆಗೆ ನಿಲ್ಲುತ್ತಾರೆ. ಒಂದು ವೇಳೆ ಇಬ್ಬರಿಗಿಂತ ಹೆಚ್ಚು ಮಂದಿ ನಿಂತರೆ ನಾನೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಎಂದರೆ ಅಪ್ಪ ಮಕ್ಕಳ ಪಕ್ಷ ಎಂದು ಹೇಳಲಾಗುತ್ತಿದೆ. ಆದರೆ ನಮ್ಮದು ರೈತ ಪರ ಪಕ್ಷ....