Category: ಸಿನಿಮಾ

ಕಚಡಾ ನನ್ಮಕ್ಳು ಎಂದು ರಾಜರಥ ತಂಡ ಹೇಳಿದ್ದು ಯಾರಿಗೆ?

ರಂಗಿತರಂಗ ಚಿತ್ರದ ಖ್ಯಾತಿಯ ಅನೂಪ್ ಮತ್ತು ನಿರೂಪ್ ಭಂಡಾರಿ ಸೋದರರು ಕನ್ನಡ ಪ್ರೇಕ್ಷಕರ ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ಅವರೇಕೆ ಕ್ಷಮೆ ಕೇಳಿದರೂ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಇತ್ತೀಚಿಗೆ ಆರ್ ಜೆ ರಶ್ಮಿ ಜೊತೆ ಸಂದರ್ಶನದಲ್ಲಿ ಭಾಗಹಿಸಿದ್ದ ವೇಳೆ ಚಿತ್ರ ತಂಡ ಕನ್ನಡ ಪ್ರೇಕ್ಷಕರನ್ನು ಅವಹೇಳನಕರಿ ರೀತಿಯಲ್ಲಿ ಹೇಳಿಕೆ...

ರಾಧಿಕಾ ಸ್ಥಾನ ಅಲಂಕರಿಸಿದ ಮಯೂರಿ

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಾಯಕ ಎಂದೇ ಕರೆಯಲ್ಪಡುವ ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ರುಸ್ತುಂ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಟಗರು ಕ್ಲಿಕ್ ಆದ ಬೆನ್ನಲ್ಲೆ ಕವಚ ಸಿನಿಮಾದ ಶೂಟಿಂಗ್ ಜೋರಾಗಿ ಸಾಗುತ್ತಿದೆ. ಇದರ ನಡುವೆ ತೆರೆಮರೆಯಲ್ಲಿ ರುಸ್ತುಂ ಚಿತ್ರವು ಸೆಟ್ಟೆರಲಾರಂಭಿಸಿದೆ. ಈ...

ಎರಡನೇ ಬಾರಿಗೆ ತಾಯಿಯಾದ ಮಧು!

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಅಣ್ಣಯ್ಯ ಚಿತ್ರದಲ್ಲಿ ಕಮಾನು ಡಾರ್ಲಿಂಗ್, ಬೊಂಬೆ..ಬೊಂಬೆ..ಬೊಂಬೆ ಹಾಡಿಗೆ ಹೆಜ್ಜೆ ಹಾಕಿ ಕನ್ನಡ ಸಿನಿಪ್ರಿಯರ ಮನಗೆದ್ದಿದ್ದ ಮಧುಬಾಲಾ ಇದೀಗ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಅಭಿನಯದ ರನ್ನ ಚಿತ್ರದಲ್ಲಿ ಅತ್ತೆಯ ಪಾತ್ರದಲ್ಲಿ ಮಧುಬಾಲಾ ಕಾಣಿಸಿಕೊಂಡಿದ್ದರೂ ಅವರ ಗ್ಲಾಮರ್ ಲುಕ್ ನಿಂದ ಆ ಪಾತ್ರ ಅಷ್ಟೊಂದು...

ಜಾನಿ ಜೊತೆ ರಚಿತಾ ರೊಮ್ಯಾನ್ಸ್!

ಇದೇ ವಾರ ತೆರೆಗೆ ಬರಲು ಸಜ್ಜಾಗಿರುವ ಜಾನಿ ಜಾನಿ ಎಸ್ ಪಪ್ಪಾ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಲಿದೆಯೇ ಎಂಬ ನಿರೀಕ್ಷೆ ಗಾಂಧಿನಗರದಲ್ಲಿ ಮನೆ ಮಾಡಿದೆ. ದುನಿಯಾ ವಿಜಯ್ ಜೊತೆ ನಾಯಕಿಯಾಗಿ ಮಿಂಚಿರುವ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು...

ರಂಗಿಲಾ ಬೆಡಗಿ ಊರ್ಮಿಳಾ ಈಗ ಎಲ್ಲಿ ಕುಣಿತಿದ್ದಾರೆ ಗೊತ್ತಾ?

ರಂಗಿಲಾ ಬೆಡಗಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನೆಚ್ಚಿನ ನಟಿ ಉರ್ಮಿಳಾ ಮಾತೋಂಡ್ಕರ್ ಬಾಲಿವುಡ್ ಗೆ ಮತ್ತೆ ಮರಳಿದ್ದಾರೆ. 10 ವರ್ಷದ ಹಿಂದೆ ಉದ್ಯಮಿಯ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಣ್ಣದ ಬದುಕಿನಿಂದ ದೂರವಿದ್ದ ಊರ್ಮಿಳಾ ಇದೀಗ ಬಿಟೌನ್ ನಲ್ಲಿ ಮತ್ತೆ ಸ್ಟೆಪ್ ಹಾಕಿದ್ದಾರೆ....

5 ಕೋಟಿ ದಾಟಿದ ಬೊಂಬೆ ಹೇಳುತೈತೆ ಸಾಂಗ್ 

ಪುನೀತ್ ರಾಜ್ ಕುಮಾರ್ ಅಭಿನಯದ ರಾಜ್ ಕುಮಾರ್ ಚಿತ್ರದ ಬೊಂಬೆ ಹೇಳುತೈತೆ ಹಾಡು ಸ್ಯಾಂಡಲ್ ವುಡ್ ನಲ್ಲಿ ದಾಖಲೆ ನಿರ್ಮಿಸಿದೆ. ಯೂಟೂಬ್ ನಲ್ಲಿ ಈ ಹಾಡು ವೀಕ್ಷಿಸಿದವರ ಸಂಖ್ಯೆ ಐದು ಕೋಟಿ ದಾಟಿದ್ದು, ಕನ್ನಡ ಚಿತ್ರರಂಗದ ಯಾವುದೇ ಹಾಡು ಮಾಡದ ದಾಖಲೆಯನ್ನು ಬೊಂಬೆ ಹೇಳುತೈತೆ ಮಾಡಿದೆ. ಆರಂಭದಲ್ಲಿ...

ಮರಿ ಟೈಗರ್ ಈಗ ಸ್ಯಾಂಡಲ್ ವುಡ್ ನ ಅರ್ನಾಲ್ಡ್

ಟೈಗರ್ ಪ್ರಭಾಕರ್ ಅವರ ಬಾಡಿ, ವಾಯ್ಸ್ ಅದರಲ್ಲೂ ಅವರು ಹುಲಿ ತರಹ ಗುಟುರು ಹಾಕುತ್ತಿದ್ದ ಸ್ಟೈಲ್ ಗೆ ಕನ್ನಡ ಚಿತ್ರಪ್ರೇಮಿಗಳು ಇಂದಿಗೂ ಪ್ರಭಾಕರ್ ಅವರನ್ನು ನೆನೆಸಿಕೊಳ್ಳುತ್ತಾರೆ. ಈಗ ತಂದೆ ಹಾದಿಯಲ್ಲೇ ಅವರ ಮಗ ವಿನೋದ್ ಪ್ರಭಾಕರ್ ಕೂಡ ಸಾಗಿದ್ದಾರೆ. ಸ್ಯಾಂಡಲ್ ವುಡ್ ನ ಅರ್ನಾಲ್ಡ್ ಆಗಿ ಅವರು...

ಬಾಲಿವುಡ್ ನಲ್ಲೂ ಶುರುವಾಯ್ತು ಅಂಬಾನಿ ಹವಾ

ರಿಲಯನ್ಸ್ ಗ್ರೂಪ್ ಏನೇ ಮಾಡಿದರೂ ಅದು ದೇಶಾದ್ಯಂತ ಸುದ್ದಿಯಾಗುತ್ತದೆ. ಜಿಯೋ ಮೂಲಕ ಟೆಲಿಕಾಂ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದ್ದ ಮುಕೇಶ್ ಅಂಬಾನಿ ಇದೀಗ ಬಾಲಿವುಡ್ ನಲ್ಲೂ ಹವಾ ಸೃಷ್ಟಿಸಲು ಹೊರಟಿದ್ದಾರೆ. ಈಗಾಗಲೇ ನ್ಯೂಸ್, ಎಂಟರ್ ಟೈನ್ ಮೆಂಟ್ ಚಾನಲ್ ಗಳಿಗೆ ಹಣ ಹಾಕಿರುವುದು ಮಾತ್ರವಲ್ಲದೆ ಸಣ್ಣಪುಟ್ಟ ಚಿತ್ರಗಳನ್ನೂ ನಿರ್ಮಿಸಿದ್ದರು....

ಪೂಜಾಗಾಂಧಿ ಆ ಸೀನ್ ಗೆ ಶಾಕ್!

ದಂಡುಪಾಳ್ಯ ಪಾರ್ಟ್ ಒನ್ ಮತ್ತು ಪಾರ್ಟ್ ಟೂ ಚಿತ್ರಗಳ ಬಳಿಕ ಇದರ ಮೂರನೇ ವರ್ಶನ್ ತೆರೆಕಂಡಿದೆ. ಮೊದಲ ಭಾಗದಲ್ಲಿ ಕ್ರೌರ್ಯ ರಕ್ತಚರಿತ್ರೆಯಿಂದ ಕೂಡಿದ್ದರೆ ಎರಡನೇ ಭಾಗದಲ್ಲಿ ಗ್ಯಾಂಗ್ ಹಿನ್ನೆಲೆ ಮತ್ತು ಜೀವನವನ್ನು ತಿಳಿಸಲಾಗಿತ್ತು. ಇದೀಗ ತೆರೆಕಂಡಿರುವ ಮೂರನೇ ಭಾಗದಲ್ಲಿ ಪೊಲೀಸ್ ವರ್ಶನ್ ಹೇಳಲಾಗಿದೆ. ಚಿತ್ರದಲ್ಲಿ ಶೃತಿ ಹೊಸದಾಗಿ...

ನಟಸಾರ್ವಭೌಮನಾಗಿ ಟ್ರೆಂಡ್ ಸೃಷ್ಟಿಸಿದ ಪುನೀತ್

ನಟಸಾರ್ವಭೌಮನಾಗಿ ಟ್ರೆಂಡ್ ಸೃಷ್ಟಿಸಿದ ಪುನೀತ್

ವರನಟ ಬಿರುದಾಕಿಂತ ಡಾ.ರಾಜ್ ಕುಮಾರ್ ಅವರನ್ನು ಕನ್ನಡ ಚಿತ್ರರಸಿಕರು ನಟಸಾರ್ವಭೌಮ ಎಂದೇ ಕರೆಯುತ್ತಿದ್ದರು. ಇದೀಗ ಈ ಬಿರುದು ಪುನೀತ್ ರಾಜ್ ಕುಮಾರ್ ಪಾಲಾಗಿದೆ. ನಟಸಾರ್ವಭೌಮ ಎಂಬ ಟೈಟಲ್ ಹೊರಬಿದ್ದಿದ್ದೆ ತಡ ಟ್ವಿಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಆಗಿ ಸಖತ್ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್...