Tagged: ರವಿಚಂದ್ರನ್

ಮತ್ತೆ ಡೈರಕ್ಟರ್ ಕ್ಯಾಪ್ ತೊಟ್ಟ ಕ್ರೇಜಿಸ್ಟಾರ್

ಕ್ರೇಜಿಬಾಯ್ ಪಾತ್ರಗಳನ್ನು ಬಿಟ್ಟು ಪೋಷಕ ಪಾತ್ರಗಳತ್ತ ವಾಲಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ ಮತ್ತೇ ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ದೃಶ್ಯ ಚಿತ್ರದ ಪಾತ್ರಧಾರಿ ರಾಜೇಂದ್ರ ಪೊನಪ್ಪನಾಗಿ ರವಿಚಂದ್ರನ್ ನಟಿಸಿದ್ದರು. ಇದೀಗ ಇದೇ ಹೆಸರಿನಲ್ಲಿ ಸೆಟ್ಟೇರಲಿರುವ ಚಿತ್ರದ ಪೋಸ್ಟರ್ ಗಳನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ. ತಾವೇ...

ವಿಲನ್ ರೋಲ್ ನಲ್ಲಿ ರಾಘವೇಂದ್ರ ರಾಜ್ ಕುಮಾರ್

ಪಕ್ಕದ ಮನೆ ಹುಡುಗಿ ಚಿತ್ರದ ನಂತರ ನಟನೆಯಿಂದ ದೂರ ಉಳಿದಿದ್ದ ರಾಘವೇಂದ್ರ ರಾಜ್ ಕುಮಾರ್ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಎಂದರೆ ಸಾಕಷ್ಟು ವರ್ಷಗಳ ಬಳಿಕ ಬಣ್ಣ ಹಚ್ಚುತ್ತಿರುವುದು ಒಂದುಕಡೆಯಾದರೆ ಇದೇ ಮೊದಲ ಬಾರಿಗೆ ಅವರು ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಪುತ್ರ ಮನೋರಂಜನ್...

ಸರಿಗಮಪ ಕಾರ್ಯಕ್ರಮದಲ್ಲಿ ಹಂಸಲೇಖಗೆ ಏನಾಯ್ತು?

ಖ್ಯಾತ ಸಂಗೀತ ನಿರ್ದೇಶಕ, ಗೀತೆ ರಚನೆಕಾರ ಹಂಸಲೇಖ ಅವರು ಆಸ್ಪತ್ರೆ ಸೇರಿದ್ದಾರೆ. ಮಂಗಳವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸರಿಗಮಪ ರಿಯಾಲಿಟಿ ಶೋ ನಡೆಸಿಕೊಡುವ ವೇಳೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಅವರು...

ಮತ್ತೆ ಖಳನಾಯಕನ ಪಾತ್ರದಲ್ಲಿ ಕ್ರೇಜಿಸ್ಟಾರ್

ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ, ನಿರ್ಮಾಪಕ, ನಿರ್ದೇಶಕ ರವಿಚಂದ್ರನ್ ಅವರು ಮತ್ತೊಮ್ಮೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಆರಂಭದಲ್ಲಿ ಗಿಟರ್ ಹಿಡಿದು ಯುವಕ-ಯುವತಿಯರ ಮನಗೆದ್ದಿದ್ದ ರವಿಚಂದ್ರನ್ ವಯಸ್ಸಾದರೂ ಪ್ರೇಮ ಕತೆಗಳಿಗೆ ಸಂಬಂಧಿಸಿದಂತೆ ಪಾತ್ರ ಆಯ್ಕೆ ಮಾಡಿಕೊಂಡಿದ್ದು ಬಿಟ್ಟರೆ ಖಳನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ಹಿರೋ ಆಗುವುದಕ್ಕೂ...

ರೀಮೇಕ್ ಸಿನಿಮಾದಿಂದ ಮನೋರಂಜನ್ ಸೆಕೆಂಡ್ ಇನ್ನಿಂಗ್ಸ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಸ್ಯಾಂಡಲ್ ವುಡ್ ನಲ್ಲಿ ಇಂದಿನಿಂದ ಸೆಕೆಂಡ್ ಆರಂಭಿಸುತ್ತಿದ್ದಾರೆ. ಚೊಚ್ಚಲ ಚಿತ್ರ ಸಾಹೇಬ ಅಷ್ಟೇನೂ ಹಿಟ್ ಆಗದಿದ್ದರೂ ಮನೋರಂಜನ್ ಅಭಿನಯ ಮಾತ್ರ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಸೌಮ್ಯ ಸ್ವಭಾವದ ಹುಡುಗನಾಗಿ ಕಾಣಿಸಿಕೊಂಡು ಸೋಲುಂಡಿದ್ದ ಮನೋರಂಜನ್ ಇದೀಗ ಬೃಹಸ್ಪತಿಯಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಥೇಟ್...

ಮುನಿರತ್ನ ಕುರುಕ್ಷೇತ್ರದಲ್ಲಿ ದರ್ಶನ್ ಆರ್ಭಟ

ಶಾಸಕ ಮುನಿರತ್ನ ನಿರ್ಮಾಣ ಮಾಡುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರ ಅಂತಿಮಘಟ್ಟ ತಲುಪಿದೆ. ಹೈದರಾಬಾದ್ ನಲ್ಲಿರುವ ರಾಮೋಜಿರಾವ್ ಫಿಲಂಸಿಟಿಯಲ್ಲಿ ಬಾಹುಬಲಿ ರೇಂಜ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಉರಿ ಬಿಸಿಲಿನಲ್ಲಿ ಸಾವಿರಾರು ಕಲಾವಿದರು ಮಾತ್ರವಲ್ಲದೆ ಸ್ಟಾರ್ ನಟರಾದ ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ಶಶಿಕುಮಾರ್,...

ಶಿವಣ್ಣ ಜೊತೆ ಮತ್ತೊಂದು ಸಿನಿಮಾ

ಸ್ಯಾಂಡಲ್ ವುಡ್ ನ ಅಣ್ಣ ತಂಗಿ ಎಂದೇ ಮನೆಮಾತಾಗಿರುವ ರಾಧಿಕಾ ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಸೆಟ್ಟೇರಲಿದೆ. ಅಂದ ಹಾಗೆ ಈ ಬಾರಿ ಅಣ್ಣ ತಂಗಿಯೆಂಬ ಸೆಂಟಿಮೆಂಟಲ್ ಚಿತ್ರವಾಗಿರದೆ ಹಾರರ್ ಮೂವಿಯಾಗಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಸ್ವೀಟಿ ಚಿತ್ರದ ಬಳಿಕ ಗಾಂಧಿನಗರದಿಂದ ದೂರ...

ಹೈದರಾಬಾದ್ ನಲ್ಲಿ ಭೀಮ, ಧುರ್ಯೋಧನರ ಕಸರತ್ತು

ಮುನಿರತ್ನ ನಿರ್ಮಾಣದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಜೋರಾಗಿ ಸಾಗುತ್ತಿದೆ. ಮಹಾಭಾರತದ ಕತೆಯನ್ನು ಒಳಗೊಂಡಿರುವ ಬಹುಕೋಟಿ ವೆಚ್ಚದ ಪೌರಣಿಕ ಸಿನಿಮಾದಲ್ಲಿ ಬಾಲಿವುಡ್ ತಾರೆಯರು ಕೂಡ ಬಣ್ಣ ಹಚ್ಚುತ್ತಿದ್ದಾರೆ. ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ ಮಿಂಚಿದರೆ ಧುರ್ಯೋಧನನ ಪಾತ್ರದಲ್ಲಿ...

ಕುರುಕ್ಷೇತ್ರಕ್ಕೆ ಕಾಲಿಟ್ಟ ಹರಿಪ್ರಿಯಾ

ದರ್ಶನ್, ರವಿಚಂದ್ರನ್ ಸೇರಿದಂತೆ ಬಹುತಾರಾಗಣದ ಮಲ್ಟಿಸ್ಟಾರರ್ ಚಿತ್ರವೆಂದೇ ಹೆಸರಾಗುತ್ತಿರುವ ಕುರುಕ್ಷೇತ್ರ ಚಿತ್ರದಲ್ಲಿ ಘಟಾನುಘಟಿ ನಾಯಕರುಗಳ ಆಯ್ಕೆಯಾಗಿದ್ದರೂ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿತ್ತು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ನೀರ್ ದೋಸೆ ಚೆಲುವೆ ಹರಿಪ್ರಿಯಾ ಅವರು ಕುರುಕ್ಷೇತ್ರ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು...

ಕುರುಕ್ಷೇತ್ರಕ್ಕೆ ಹರಿಕೃಷ್ಣ ಮ್ಯೂಸಿಕ್

ಕುರುಕ್ಷೇತ್ರಕ್ಕೆ ಹರಿಕೃಷ್ಣ ಮ್ಯೂಸಿಕ್

ಕುರುಕ್ಷೇತ್ರ ಚಿತ್ರ ತಂಡದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಶಾಸಕ ಮುನಿರತ್ನ ನಿರ್ಮಾಣ ಮಾಡುತ್ತಿರುವ ಐತಿಹಾಸಿಕ ಕನ್ನಡ ಸಿನಿಮಾಕ್ಕೆ ಹರಿಕೃಷ್ಣ ಮ್ಯೂಸಿಕ್ ಬಾರಿಸಲಿದ್ದಾರೆ ಎಂಬ ಮಾತು ಗಾಂಧಿನಗರ ದಲ್ಲಿ ಹರಿದಾಡುತ್ತಿದೆ. ಕುರುಕ್ಷೇತ್ರ ಮಹಾಭಾರತ ಕಥೆಯನ್ನು ಒಳಗೊಂಡಿರುವುದರಿಂದ ಸಂಗೀತ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ...